ಗಣಿತಕ್ಕೆ ಅನ್‌ರೂಲ್ಡ್...
ಅಪ್ಪನಿಗೀಗ ನೋಟು ಬುಕ್ಕು ಹೆಕ್ಕುವ ಹೊಣೆ. ಪ್ರತಿ ಸಂಜೆ ಪೇಟೆಗೆ ಹೊರಟಾಗಲೆಲ್ಲಾ ಅಂಗಡಿ ಮೇಲೆಯೇ ಕಣ್ಣು. ಅಲ್ಲಿ ಪೇರಿಸಿಟ್ಟ ದಂಡಿ ದಂಡಿ ಪುಸ್ತಕ ಕಂಡು ಮನದೊಳಗೆ ಏನೇನೋ ಲೆಕ್ಕ. ಅದರ ದರ, ಕಾಗದದ ಗುಣಮಟ್ಟ ಎಲ್ಲವನ್ನೂ ತಾಳೆ ಹಾಕಿದ ನಂತರವೇ ತೀರ್ಮಾನ.
ಹೊಸ ಶೈಕ್ಷಣಿಕ ವರ್ಷ ಎಂಬುದು ಶಿಕ್ಷಣ ಇಲಾಖೆಯ ತಖ್ತೆಃಯಲ್ಲಿ. ಮನೆಯಲ್ಲಿ ಮಕ್ಕಳು ಮತ್ತೊಂದು ಕ್ಲಾಸು ಪಾಸಾಗಿದ್ದಾರೆ ಎಂದೇ ಅರ್ಥ. ಪುಸ್ತಕದ ಅಂಗಡಿಯಲ್ಲಿ ನೋಟ್ ಪುಸ್ತಕಗಳ ರಾಶಿ. ಓದದವನ ಮನಸ್ಸಿನಲ್ಲೂ ಓದುವ ಹುಚ್ಚು ಹಚ್ಚುವ ಕಿಚ್ಚು.
ತರಹೇವಾರಿ ಪುಸ್ತಕಗಳ ಮುಖಪುಟ ವರ್ಣನೆಗೇ ಒಂದು ಕಿಮ್ಮತ್ತಿದೆ. ಒಂದರ ಮುಖಪುಟ ಬಣ್ಣದ್ದು, ಒಳಗೆ ಹಾಳೆ ಬಹಳ ತೆಳು. ಮತ್ತೊಂದರದ್ದು ಹಾಳೆ ಚೆನ್ನಾಗಿದೆ, ಅದರ ಮೇಲಿನ ಗೆರೆ ಸ್ವಲ್ಪ ವಕ್ರ. ಮತ್ತುಳಿದ ಪುಸ್ತಕದಲ್ಲಿ ಕೆಲವನ್ನು ಕತ್ತರಿಸಿದ್ದೇ ಸರಿಯಿಲ್ಲ.
ತಾನು ಕೊಂಡದ್ದು ಎಲ್ಲರ ಪುಸ್ತಕಕ್ಕಿಂತ ಚೆನ್ನಾಗಿರಬೇಕೆಂಬ ಒಲವು. ದೊಡ್ಡವರಾದ ಮೇಲೆ ಹೇಳುವ ‘ಅನುಪಮದ ಹಾಗೆ. ಅಪ್ಪನ ಹಿಂದೆ ಮಗನೂ ಅಂಗಡಿಗೆ. ಪುಸ್ತಕ ಹುಡುಕುವುದೆಂದರೆ ಆಟಿಕೆ ಲೋಕದಲ್ಲಿದ್ದ ಹಾಗೆ ನನಗೆ. ಜಿಂಕೆ ಮುಖ, ಹುಲಿ, ಸಿಂಹ, ಗಿಳಿ, ಪಕ್ಷಿ ಸ್ಟಿಕ್ಕರ್‌ಗಳಿಂದ ವಿಜೃಂಭಿತ. ಇದು ಕೆಲವೇ ದಿನ. ನಂತರ ಇವೆಲ್ಲದರ ಸ್ಥಾನದಲ್ಲಿ ಮಿಕ್ಕಿ ಮೌಸ್, ಡೊನಾಲ್ಡ್‌ಗಳ ಹಾಜರಿ.
ಬಾತುಕೋಳಿ ನಿಂತ ಹಾಗೆ ಎನಿಸುವ ಡೊನಾಲ್ಡ್ ನಮಗೆ ಹೊಸದೇ. ಡೊನಾಲ್ಡ್‌ನ ಮಾತು ನಮಗೂ ಅರ್ಥವಾಗುತ್ತಲ್ಲ. ಅದಕ್ಕೇ ಕೆರೆಯ ಬಾತುಕೋಳಿಗಿಂತ ಭಿನ್ನ.
ಇದರ ನಡುವೆ ಲೇಖಕ್ ಆಗಮನ. ಎಷ್ಟು ಒಳ್ಳೆ ಪುಸ್ತಕ, ಹಾಳೆ ಬೆಳ್ಳಗೆ ಎನಿಸಿದರೂ ಅಲ್ಪ ನೀಲಿ ಮಿಶ್ರಿತ. ನೀಲಿಬಿಳಿ ಮೋಡದಂತೆ. ಹಾಳೆ ತುಂಬಾ ದಪ್ಪ. ಎಷ್ಟೆಂದರೆ ನನ್ನ ಇಂಕಿನ ಪೆನ್ನಿನ ನಿಬ್ಬು ಕಕ್ಕಿದಾಗಲೆಲ್ಲಾ ಬೇಸರವನ್ನೇ ಮಾಡಿಕೊಂಡದ್ದಿಲ್ಲ. ದರದ ಮಾತಿನಲ್ಲಿ ೫೦ ಪೈಸೆ ಹೆಚ್ಚಿರಬಹುದು. ಅದರ ಉಸ್ತುವಾರಿ ಅಪ್ಪನಿಗಿರಬೇಕು. ಮಗನಿಗೇನಿದ್ದರೂ ಹಾಳೆ, ದಟ್ಟಿಯ ಸುಖ.
ಗಣಿತಕ್ಕೆ ಮಾತ್ರ ಅನ್‌ರೂಲ್ಡ್. ಉಳಿದವಕ್ಕೆಲ್ಲಾ ರೂಲೇ ಇರಬೇಕೆಂಬ ಅಘೋಷಿತ ರೂಲು. ಪುಸ್ತಕದ ಪ್ರತಿ ಹಾಳೆಗೂ ಲೆಕ್ಕ. ಅಮ್ಮನಿಗೆ ಪಾಕ ಪ್ರವೀಣೆಯ ಜತೆ ಹಾಳೆಯ ನಿರ್ವಹಣೆ. ಒಂದು ಹರಿದಿದ್ದರೆ ಎರಡು ಪೆಟ್ಟು . ಜತೆಗೆ ದುಡ್ಡಿನ ಬೆಲೆ ತಿಳಿದಿಲ್ಲವೆಂಬ ಬೈಗುಳ. ಹರಿದು ಹೋದದ್ದಕ್ಕೆ ‘ಕಾನೂನುಕ್ರಮ. ಇಂಥದ್ದರ ಮಧ್ಯೆಯೂ ಅಪ್ಪನಿಗೆ ಪುಸ್ತಕದ ಬಂಡಲ್ ತರುವುದೆಂದರೆ ಹಣ ಕಳೆದುಕೊಂಡೂ ಏನನ್ನೋ ಗಳಿಸಿದ್ದರ ‘ಬಣ್ಣ’ನೆಗೆ ನಿಲುಕದ ಖುಷಿ.
[ ... ]