
ತಣ್ಣನೆಯ ವಿಷಾದ.
ಕಾರು ಗುದ್ದಿದ ರಭಸಕ್ಕೆ ಅವನು ಅಷ್ಟು ದೂರ ದಬಕ್ಕನೆ ಬಿದ್ದ. ಕಾರೂ ಕೊಂಚ ಮುಂದಕ್ಕೆ ಹೋಗಿ ಗಕ್ಕನೆ ನಿಂತಿತು. ಕೆಲ ಕ್ಷಣ. ಮರುಕ್ಷಣವೇ ಮಂಗಮಾಯ. ಕತ್ತಲೆಯಲ್ಲಿ ಕರಗಿ ಹೋಗಿದ್ದು ತಿಳಿಯಲೇ ಇಲ್ಲ. ತಾರಸಿಯ ಮೇಲೆ ನಿಂತಿದ್ದ ನಾನು ನೋಡುತ್ತಲೇ ಇದ್ದೆ. ಅವನ ಮುಖದಲ್ಲಿ ಯಾವ ಚಲನೆಯೂ ಕಾಣಲಿಲ್ಲ. ರಸ್ತೆ ದೀಪ ಸಹ ಕೊಂಚ ಮಂಕೆನಿಸುತ್ತಿತ್ತು. ವಿಷಾದ ರಾಗಕ್ಕೆ ಬರೆದ ಮುನ್ನುಡಿಯಂತಿತ್ತು. ಮುಖವೂ ಸ್ಪಷ್ಟವಾಗಿ ತೋರುತ್ತಿರಲಿಲ್ಲ. ನಾನೂ ಸಹ ಯಾಂತ್ರಿಕವಾಗಿ ರಸ್ತೆ ಮೇಲೆ ಬಿದ್ದ ಅವನನ್ನೇ ದಿಟ್ಟಿಸುತ್ತಿದ್ದೆ. ಯಾವುದೋ ದ್ರವ ಅವನಿದ್ದ ಭಾಗವನ್ನು ಆವರಿಸುತ್ತಿತ್ತು. ರಕ್ತದ ಬಣ್ಣ ನನಗೆ ತೋರಲಿಲ್ಲ. ಆದರೂ ರಕ್ತ ಎಂದುಕೊಂಡೆ. ತಲೆಭಾಗದ ಹಿಂದೆಯೂ ವ್ಯಾಪಿಸಿತು. ಕೆಲ ಕ್ಷಣದಲ್ಲೇ ರಕ್ತದ ಕೆಂಪೂ ರಸ್ತೆಯ ಬಣ್ಣಕ್ಕೆ ತಿರುಗಿಕೊಂಡಿತು.
ಆ ಕ್ಷಣದಲ್ಲಿ ಅಲ್ಲಿ ಅದೊಂದೇ ಚಲನಶೀಲ. ನಾನು ಸುಮ್ಮನೆ ನಿಂತಿದ್ದೆ ; ನನಗೇ ತೋಚದೇ. ಕೆಲವೇ ಕ್ಷಣ. ಕೈ ಮೆಲ್ಲಗೆ ಅಲುಗಾಡತೊಡಗಿತು. ನಂತರ ಅವನ ತೋಳು, ತಲೆ...ಬಹಳ ನೋವಿನಿಂದ ತಲೆ ಎತ್ತಿ ನನ್ನತ್ತ ದಿಟ್ಟಿಸಿದ.ಹೆಗಲ ಮೇಲಿದ್ದ ಕ್ಯಾಮೆರಾ ಕೈಗೆ ಬಂತು. ಲೆನ್ಸ್‌ನ ಮುಖಕ್ಕೆ ಮರೆ ಮಾಡಿಕೊಂಡು ಕ್ಲಿಕ್ಕಿಸಿದೆ. ಅದೊಂದು ಅದ್ಭುತ ಲೈವ್ ಫೋಟೋಗ್ರಾಫ್ ! ಪಾಕಿಸ್ತಾನದ ಅಮೀರ್ ಸಲೀಂನ ಸಣ್ಣ ಕಥೆಯ ಅನುವಾದ. (ಚಿತ್ರ : ಪ್ರವೀಣ್ ಬಣಗಿ)
1 comments:
toombaa melodrama aagide ee kathe, anuvaada chennagide.
jayantha kalykini muntaadavaru beekadara bloody journalism enna bahudu.
Post a Comment